ಪ್ರಕರಣ -2
ಅಕಾಡೆಮಿಯ ಉದ್ದೇಶ ಸಾಧನೆಗಾಗಿ ಹಮ್ಮಿಕೊಂಡಿರುವ ಕಾರ್ಯಕ್ರಮಗಳು
 
1. ಪರಿಶಿಷ್ಟ ಪಂಗಡ ಮತ್ತು ಪರಿಶಿಷ್ಟ ಜಾತಿಯ ಕೊಡವ ಭಾಷೆ ಮಾತನಾಡುವ ಕಲಾವಿದರಿಗೆ ಯೋಜನೆ
ಅ) ಕುಡಿಯ ಜನಪದ ನಮ್ಮೆ (ಕುಡಿಯರ ಪರಿಶಿಷ್ಟ ಪಂಗಡದ ಕುಡಿಯರ ಜನಪದ ಕಲೆಗಳ ಪ್ರದರ್ಶನ, 5 ಜನಪದ ಕಲಿಕಾ ಶಿಬಿರ, ವಿಚಾರ 
ಸಂಕಿರಣ, ಉತ್ಸವವನ್ನು ಹಮ್ಮಿಕೊಳ್ಳಲಾಗಿದೆ.)
ಆ) ಪರಿಶಿಷ್ಟ ಪಂಗಡ ಇನ್ನೊಂದು ಜನಪದ ಜನಾಂಗವಾದ ಮೇದರ ಮೇದಪರೆ ಪಡಿಪು ಮತ್ತು ಅವರ ಒಟ್ಟಾರೆ ಸಂಸ್ಕøತಿಯ ಅನಾವರಣಕ್ಕಾಗಿ ಜೊತೆಗೆ ಈ ಪಂಗಡದ ಜನಪದ ಕಲಾವಿದರ ಮಕ್ಕಳಿಗೆ ಕಲಾಶಿಬಿರ ನಡೆಸಲು 2 ದಿನಗಳ ಸಾಂಸ್ಕøತಿಕ ಉತ್ಸವ ಯೋಜನೆ ಮತ್ತು 5 ಶಿಬಿರಗಳನ್ನು ನಡೆಸಲಾಗುವುದು.
ಇ) ಕೊಡಗಿನ ಕೊಡವ ಭಾಷೆ ಮಾತನಾಡುವ ಪರಿಶಿಷ್ಟ ಜಾತಿಯ ಕೆಂಬಟ್ಟಿ ಮತ್ತು ಕಾಪಳ ಜಾನಪದ ಕಲಾವಿದ ಕಲೆಗಳ ಕಲಿಕೆಯ ಒಟ್ಟು 5 
ಶಿಬಿರಗಳು, ವಾಲಗ ತರಬೇತಿ, ಮತ್ತು ಇದರ ಒಟ್ಟಾರೆ 2 ದಿನಗಳ ಉತ್ಸವ, ವಿಚಾರ ಸಂಕಿರಣ ಇತ್ಯಾದಿ ಆಚರಿಸಲು 
2. ಕೊಡವ ಸಾಹಿತ್ಯ ಉತ್ಸವ, ಪುಸ್ತಕ ಮೇಳ, ಕೊಡವ ಸಾಹಿತ್ಯದ 5 ಕಡೆ ಸಾಹಿತ್ಯ ಶಿಬಿರಗಳು ಕೊಡವ ಸಾಹಿತ್ಯ ವಿಚಾರ ಸಂಕಿರಣ
3. ಕೊಡವ ಮಾನಮ್ಮೆ : ಕೊಡವ ಒಟ್ಟಾರೆ ಜಾನಪದ ಕಲೆಗಳ ಸ್ಫರ್ಧೆ, ವಿಚಾರ ಸಂಕಿರಣ, ಸಂಜೆಯ ಸಾಂಸ್ಕøತಿಕ ಕಾರ್ಯಕ್ರಮಗಳು ಎಲ್ಲಾ ಸೇರಿ ವಾರ್ಷಿಕ ಮೂರು ದಿನಗಳ ದೊಡ್ಡ ಕೊಡವೋತ್ಸವ
4. ಕೊಡಗು ಮತ್ತು ರಾಜ್ಯದ  ಇತರೆಡೆ ಮಿನಿ ಕೊಡವೋತ್ಸವ 2 ದಿನದ ವಿಚಾರ ಸಂಕಿರಣ, ಜಾನಪದ ಕಲೆ ಪ್ರದರ್ಶನ ಮತ್ತು ಸಾಂಸ್ಕøತಿಕ ಕಾರ್ಯಕ್ರಮಗಳು 
5. ಪುಸ್ತಕ ಮುದ್ರಣ, ಕನ್ನಡದ ಖ್ಯಾತ ಕವಿ, ಸಾಹಿತಿಗಳ ಕೃತಿಗಳನ್ನು ಕೊಡವ ಭಾಷೆಗೆ ಅನುವಾದಿಸುವುದು ಮತ್ತು ಕೊಡವ ಭಾಷೆಯ ಶ್ರೇಷ್ಠ ಕೃತಿಗಳನ್ನು ಕನ್ನಡಕ್ಕೆ ಅನುವಾದಿಸುವುದು ಸೇರಿದಂತೆ ಕಥೆ, ಕವನ, ಕಾದಂಬರಿ, ವಿಮರ್ಶೆ ಪುಸ್ತಕಗಳ ಪ್ರಕರಣೆ ಮಾಡುವುದು.
6. ಮನೆ ಮನೆ ಕಾವ್ಯ ತುಳಿ: ಮನೆ ಮನೆಗಳಲ್ಲಿ ಸಣ್ಣ ಪ್ರಮಾಣದ ಕಾವ್ಯ ಲಹರಿ ಕಾರ್ಯಕ್ರಮ ನಡೆಸಿ, ಕೊಡವ ಕಾವ್ಯದ ಬಗ್ಗೆ ಆಸಕ್ತಿ ಹುಟ್ಟಿಸುವ ಯೋಜನೆ ಕನಿಷ್ಠ 10 ಕಡೆಗಳಲ್ಲಿ ಕಾರ್ಯಕ್ರಮ ಆಯೋಜನೆ
7. ಕೊಡವ ಸಂಸ್ಕøತಿಯ ಭಾಗವಾದ ಹುತ್ತರಿ ಕೋಲಾಟವನ್ನು ಮತ್ತಷ್ಟು ಜನಪ್ರಿಯಗೊಳಿಸಿ ಸಂಸ್ಕøತಿಯ ತಾಣವಾದ “ಮಂದ್” ತೆರೆಯುವ ಕಾರ್ಯಕ್ರಮ ನಡೆಸುವುದು
8. ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿಯ ವೆಬ್‍ಸೈಟ್ ಮತ್ತು ಆ್ಯಪ್ ತೆರೆಯುವ ಯೋಜನೆ
9. ಕೊಡವ ಸಾಹಿತಿಯ ಜನಪದ ಕಲೆಗಾರರ ಕವಿ, ಸಾಹಿತಿಗಳ, ವಿದ್ವಾಂಸರ ಡಾಕ್ಯುಮೆಂಟರಿ
10. ಕೊಡವ ಸಾಂಸ್ಕøತಿಕ ಬದುಕಿನ ಒಟ್ಟಾರೆ ಹುಟ್ಟು, ಬೆಳವಣಿಗೆ, ಮದುವೆ, ಸಾವು, ಇತರ ಸಾಂಸ್ಕøತಿಕ ಚಟುವಟಿಕೆಗಳ ಒಟ್ಟಾರೆ ಡಾಕ್ಯುಮೆಂಟರಿ ನಿರ್ಮಾಣ.
11. ಕೊಡವ ಜನಪದ, ಸಾಹಿತ್ಯ, ಸಂಸ್ಕøತಿ, ಕಲೆಯ ಅಧ್ಯಯನ ನಡೆಸಿ, ಇದನ್ನು ಪುಸ್ತಕ ರೂಪದಲ್ಲಿ ತರುವ ಫೆಲೋಶಿಪ್ ಬಿಡುಗಡೆ ಕಾರ್ಯಕ್ರಮ
12. ಬಾಳೊ ಉಮ್ಮತ್ತ್‍ಬೊಳಕ್ ಕೊಡವ ವಿವಿಧ ಜನಪದ ಕಲೆಗಳ ಕಲಿಕಾ ಶಿಬಿರಗಳ ಯೋಜನೆಗಾಗಿ (ಉಮ್ಮತ್ತಾಟ್, ಬೊಳಕಾಟ್, ಕತ್ತಿಯಾಟ್, ಕೋಲಾಟ್, ಪರೆಯಕಳಿ, ಉರ್‍ಟಿಕೊಟ್ಟ್ ಆಟ್ ಒಟ್ಟು ವಾರ್ಷಿಕ 20 ಶಿಬಿರಗಳಲ್ಲಿ ಕಾರ್ಯಕ್ರಮ ಆಯೋಜನೆ.
13. ಕೊಡಗಿನ ಖ್ಯಾತ ಹಿರಿಯ ಕವಿಗಳಾದ ದಿ. ಡಾ.ಐ.ಮಾ. ಮುತ್ತಣ್ಣ, ಹರದಾಸ ಅಪ್ಪಚ್ಚಕವಿಅವರ ತಲಾ 15 ಹಾಡುಗಳ 2 ಧ್ವನಿಸುರುಳಿ ಮತ್ತು ಪುಸ್ತಕ ಪ್ರಕಟಣೆ.
14. ಕೊಡವ ಬಾಲಂಗಡ ಪಾಟ್ ನಮ್ಮೆ : ಕೊಡವ ಯುವ ಸಮಾಜದಲ್ಲಿ ಕೊಡವ ಹಾಡುಗಾರರಿಗೆ ಶಾಸ್ತ್ರೀಯ, ಸುಗಮ, ಭಾವ, ಜಾನಪದ ನೀತಿಗಳ ಹಾಡನ್ನು ಜನಪ್ರಿಯಗೊಳಿಸಲು ದೊಡ್ಡ ಮಟ್ಟದ ಉತ್ಸವ ಆಚರಿಸುವ ಯೋಜನೆ
15. ಕುಂಞÂಯಡ ಜನಪದ ಸಾಂಸ್ಕøತಿಕ ಹಬ್ಬ: 10ನೇ ತರಗತಿಯ ಒಳಗಿನ ಸಣ್ಣ ಮಕ್ಕಳಲ್ಲಿ ಕೊಡವ ಜನಪದ ಕಲೆಗಳ ಸಂಸ್ಕøತಿಯನ್ನು ಅಭಿವೃದ್ಧಿ ಪಡಿಸಲು ವಿವಿಧ ಜನಪದ ಕಲೆಗಳ ಸ್ಫರ್ಧೆ ಮತ್ತು ಮಕ್ಕಳೇ ನಡೆಸುವ ದೊಡ್ಡ ಉತ್ಸವದ ಕಾರ್ಯಕ್ರಮ.
16. ಕೊಡವ ನಾಟಕ ತರಬೇತಿ : ಕೊಡವ ನಾಟಕ ಕಲೆಯನ್ನು ಅಭಿವೃದ್ಧಿ ಪಡಿಸಿ ಉತ್ತಮ ಕೊಡವ ನಾಟಕ ತಂಡಗಳು ಮತ್ತು ನಾಟಕಗಳನ್ನು ಸೃಷ್ಠಿಸಲು ನಾಟಕ ಶಿಬಿರ ನಡೆಸಿ, ಉತ್ತಮ ಪ್ರಯೋಗ ತರುವ ಯೋಜನೆ, ವಾರ್ಷಿಕ 2 ಶಿಬಿರಗಳನ್ನು ನಡೆಸಲಾಗುತ್ತಿದೆ.
17. ಕೊಡವ ಪಾಟ್ ಪಾಡಿ-ಆಟ್ ಆಡಿ : ಕೊಡವ ಸಂಗೀತಕ್ಕೆ ನೃತ್ಯಗಳನ್ನು ಅಳವಡಿಸಿ ಹೊಸ ನೃತ್ಯ ತಂಡಗಳನ್ನು ಸೃಷ್ಠಿಸುವ ಯೋಜನೆ ಇದಕ್ಕಾಗಿ ಸ್ಫರ್ಧೆ ಮತ್ತು ನೃತ್ಯೋತ್ಸವ ನಡೆಸುವ ಕಾರ್ಯಕ್ರಮ ಆಯೋಜನೆ.
18. ಕೃಷಿ ಹಬ್ಬ : ಕೊಡವ ಸಂಸ್ಕøತಿಯಲ್ಲಿ ಕೃಷಿ ಸಂಸ್ಕøತಿ ಅವಿಭಾಜ್ಯ ಅಂಗ ಕೃಷಿ ಪದ್ದತಿಯಲ್ಲಿ ಅನೇಕ ಕೊಡವ ಸಂಸ್ಕøತಿ ಜನಪದಗಳು ಅಡಗಿರುವುದರಿಂದ ಮರೆಯಾಗುತ್ತಿರುವ ಈ ಕಲೆಯನ್ನು ಅಭಿವೃದ್ಧಿ ಪಡಿಸುವ ಹಿನ್ನಲೆಯಲ್ಲಿ ಕೊಡಗು ಜಿಲ್ಲೆಯಲ್ಲಿ ಕೃಷಿ ಹಬ್ಬ “ಬೇಲ್‍ನಮ್ಮೆ” ಕಾರ್ಯಕ್ರಮ ನಡೆಸಲಾಗುವುದು.
19. ಕೊಡವ ಜಾನಪದ ಕಳಿ ನಮ್ಮೆ : ಕೊಡವ ಮೂಲ ಜಾನಪದ ಕ್ರಿಡೆಗಳು ಅನೇಕ ಇದ್ದು, ಅದನ್ನು ಜನಪ್ರಿಯಗೊಳಿಸಲು ಅವುಗಳ ಸ್ಪರ್ಧೆ ಮತ್ತು ನಾಟಿ ವೈದ್ಯರ ಸಮಾವೇಶವನ್ನು ಸೇರಿ ಒಟ್ಟಾರೆ ನಡೆಸುವ ಕಾರ್ಯಕ್ರಮ.
20. ಪುಸ್ತಕ ನಂಗಡ-ಓದುವ ಮನಸ್ಸ್ ನಿಂಗಡ : ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿಯ ಪುಸ್ತಕಗಳು ಸುಮಾರು 30 ಲಕ್ಷದಷ್ಟು ಮೌಲ್ಯದಿದ್ದು, ಅದನ್ನು ಓದುಗರ ಬಳಿ ಒಯ್ಯಲು ಕೊಡವ ಪುಸ್ತಕ ಸಂಚಾರ ಮಾಡುವ ಯೋಜನೆ ಆಯೋಜಿಸಲಾಗಿದೆ.
21. ಕೊಡವ ನಾಟಕ ನಮ್ಮೆ : ಕೊಡವ ನಾಟಕ ಶಿಬಿರದಲ್ಲಿ ಪ್ರಯೋಗಗೊಂಡ ನಾಟಕಗಳ ಉತ್ಸವವನ್ನು ಏರ್ಪಡಿಸಿ ತಂಡಗಳಿಗೆ ಉತ್ತೇಜನ ನೀಡುವುದು ರಾಜ್ಯದ 2 ಕಡೆ ನಾಟಕೋತ್ಸವ ನಡೆಸುವುದು.
22. ಕೊಡವ ಹಿರಿಯ ಸಾಹಿತಿ ಕವಿಗಳ ಸಾಹಿತ್ಯವನ್ನು ಮತ್ತು ಅವರನ್ನು ವಿದ್ಯಾರ್ಥಿಗಳಿಗೆ ಪರಿಚಯಿಸಲು ವಾರ್ಷಿಕ 20 ಶೈಕ್ಷಣಿಕ ಸಂಸ್ಥೆಗಳಲ್ಲಿ ನಡೆಸುವ ಉಪನ್ಯಾಸ ಕಾರ್ಯಕ್ರಮ.
23. ಕರ್ನಾಟಕದ ಇತರ ಅಕಾಡೆಮಿಗಳೊಂದಿಗೆ ಸೇರಿ ನಡೆಸುವ ಕಾರ್ಯಕ್ರಮ (ಉದಾ : ಪಂಚಭಾಷ ಮತ್ತು ಸಂಗಮ ಸಂಭ್ರಮ ಕಾರ್ಯಕ್ರಮ)
24. ಹೊರರಾಜ್ಯಗಳಲ್ಲಿ ಮತ್ತು ವಿಶೇಷವಾಗಿ ಗಡಿ ಪ್ರದೇಶಗಳಲ್ಲಿ ಕೊಡವ ಸಾಂಸ್ಕøತಿಕ ವಿನಿಮಯ ಕಾರ್ಯಕ್ರಮ ಮತ್ತು ಕನ್ನಡ ಕೊಡವ ಭಾಷೆಯ ಜಂಟಿ ಕಾರ್ಯಕ್ರಮ ನಡೆಸಲಾಗುವುದು.
25. ಕೊಡಗಿನ ಹಿರಿಯ ಸಾಹಿತಿಗಳಿಗೆ ಗೌರವ ಪ್ರಶಸ್ತಿ ಮತ್ತು ಲೇಖಕರಿಗೆ “ಪುಸ್ತಕ ಪ್ರಶಸ್ತಿ” ವಿತರಣೆ
26. ಕೊಡವ ವಾದ್ಯ, ತೆರೆ ಪರಿಕರ ನೀಡುವುದು. (ತೆರೆ ಸಂಸ್ಕøತಿ ಪರಿಕರ : ಕೊಡಗಿನ ತೆರೆ ಸಂಸ್ಕøತಿಯಲ್ಲಿ ಇರುವ ಹಿಂದುಳಿದ ವರ್ಗದ ಜನಪದ ಕಲಾವಿದರಾದ ಬಣ್ಣ ಮತ್ತು ಮಲಿಯ ಜನಾಂಗದ ಜಾನಪದ ನಡೆಸುತ್ತಾ ಬಂದಿರುವ ಅಳಿವಿನ ಅಂಚಿನಲ್ಲಿರುವ ತೆರೆ ಸಂಸ್ಕøತಿಯ ಪರಿಕರಗಳ ಖರೀದಿ ಮಾಡಿ ವಿತರಣೆ ಮಾಡುವುದು.)
27. ಕೊಡವ ತ್ರೈಮಾಸಿಕ “ಪೊಂಗುರಿ” ಪ್ರಕಟಣೆ : ಅಕಾಡೆಮಿ ಕಾರ್ಯಕ್ರಮ ಮತ್ತು ಯುವ ಸಾಹಿತಿಗಳನ್ನು ಮುಂದಿನ ಪೀಳಿಗೆಗೆ ಪರಿಚಯಿಸಲು ಕಥೆ, ಚುಟುಕು, ಕಾದಂಬರಿ ಆಹ್ವಾನಿಸಿ 3 ತಿಂಗಳಿಗೊಮ್ಮೆ ತ್ರೈಮಾಸಿಕ ಸಂಚಿಕೆಯನ್ನು ಪ್ರಕಟಿಸುತ್ತಿದ್ದೇವೆ.
28. ಅಕಾಡೆಮಿ ಪ್ರಾಯೋಜಕತ್ವ : ಬೇರೆ ಬೇರೆ ಸಂಘ-ಸಂಸ್ಥೆಗಳು ನಡೆಸುವ ಸಾಂಸ್ಕøತಿಕ ಕಾರ್ಯಕ್ರಮಗಳಿಗೆ ಪ್ರಾಯೋಜಕತ್ವ ಕೇಳಿಬರುವ ಅರ್ಜಿಗಳನ್ನು ಪರಿಶೀಲಿಸಿ ಸ್ಥಾಯಿ ಸಮಿತಿ ತೀರ್ಮಾನದಂತೆ ತಂಡಗಳನ್ನು ಕಳುಹಿಸಿಕೊಡುವ ಪ್ರಾಯೋಜಕತ್ವ ಯೋಜನೆ.
29. “ಕೊಡವ ಪೊಮ್ಮಕ್ಕಡ ಸಾಂಸ್ಕøತಿಕ ಕಾರ್ಯಕ್ರಮ “
30. ಕೊಡವ ಪ್ರಖ್ಯಾತ ಜಲಪಾತಗಳಲ್ಲಿ “ಕೊಡವ ಜಲಪಾತ ಉತ್ಸವ”ದ ಕಾರ್ಯಕ್ರಮ
31. ಕೊಡವ-ಕೊಡವ ಭಾಷಿಕರ ಸಂಸ್ಕøತಿ ಮುಂದ್‍ಮನೆ , ಐನ್‍ಮನೆ, ಕೈಮಡಗಳ ಸಂರಕ್ಷಣೆ
32. ಕೊಡವ ಬಾಲಂಗಡ ಪಾಟ್ ನಮ್ಮೆ” : ಕೊಡವ ಯುವ ಸಮಾಜದಲ್ಲಿ ಕೊಡವ ಹಾಡುಗಾರರಿಗೆ ಶಾಸ್ತ್ರೀಯ, ಸುಗಮ, ಭಾವ, ಜಾನಪದ, ನೀತಿಗಳ ಹಾಡುಗಳನ್ನು ಜನಪ್ರಿಯಗೊಳಿಸಲು ದೊಡ್ಡ ಮಟ್ಟದ ಉತ್ಸವ
33. ಫೀಲ್ಡ್ ಮಾರ್ಷಲ್ ಕಾರ್ಯಪ್ಪ, ಜನರಲ್ ತಿಮ್ಮಯ್ಯ ಮತ್ತು ಇತರೆ ಸಮಾಜ ಕ್ಷೇತ್ರದಲ್ಲಿ ದೇಶಸೇವೆ ಮಾಡಿದ ಮಹಾನ್ ವ್ಯಕ್ತಿಗಳ ಜನ್ಮ ದಿನಾಚರಣೆ ಸಮಾರಂಭ ಆಯೋಜನೆ.